ಕೇಂದ್ರ ಸರ್ಕಾರದ ಹೊಸ ನೀತಿ - ವರಮಾನ ತೆರಿಗೆ ಪಾನ್ ಕಾರ್ಡ್ ದಿನಾಂಕ ೦೧-೦೪-೨೦೧೦

ಕೇಂದ್ರ ಸರ್ಕಾರ ೧ನೇ ಏಪ್ರಿಲ್ ೨೦೧೦ ರಿಂದ ವರಮಾನ ತೆರಿಗೆಯಲ್ಲಿ ಕೆಲವು ಬದಲಾವಣೆಯನ್ನು ತಂದಿದೆ, ಯಾವುದೇ ವ್ಯಕ್ತಿಯು ವರಮಾನದಲ್ಲಿ ಸಂಬಳ ಅಥವಾ ವ್ಯವಹಾರಸ್ಥರು ಪಾನ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಕೆಳಗಿನ ಸವಲತ್ತು ಹಾಗು ದಂಡವನ್ನು ವಸೂಲಿ ಮಾಡುವ ಇರಾದೆ ವ್ಯಕ್ತಪಡಿಸಿದೆ.
೧. ಸಂಬಳದಾರರು ಪಾನ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಮತ್ತು ಅವರ ಆದಾಯ ತೆರಿಗೆಯನ್ನು ಕಟ್ಟದವರಾಗದಿದ್ದಲ್ಲಿ - ಅವರು ಕೆಲಸ ಮಾಡುವ ಸಂಸ್ಥೆಯೇ ಸಂಬಳದಲ್ಲಿ ಶೇ ೨೦% ಭಾಗವನ್ನು ಹಿಡಿದುಕೊಂಡು ಉಳಿದ ಸಂಬಳವನ್ನು ಕೊಡುವುದು.
೨. ಸಂಬಳದಾರರು ಪಾನ್ ಕಾರ್ಡ್ ಹೊಂದಿದ್ದು ಅವರು ಆದಾಯ ತೆರೆಗಿಯ ಪಾವತಿಗೆ ಅರ್ಹರಾಗದಿದ್ದರು, ಸಂಸ್ಥೆಯು ಉದ್ಯೋಗಿಗಳ ಪಾನ್ ಕಾರ್ಡ್ ವಿವರವನ್ನು ಇರಿಸಿಕೊಳ್ಳುವುದು.
೩. ಇನ್ನು ಸಂಸ್ಥೆಯ ಪಾನ್ ಕಾರ್ಡ್ ವಿವರ ಹಾಗು ಕಾಲ ಕಾಲಕ್ಕೆ ಅದು ಕಟ್ಟುವ ಶುಲ್ಕ (ಟಿಡಿಎಸ್) ವಿವರಗಳು ಸರಿಯಾಗಿದ್ದು, ಹಾಗು ಅದು ವರಮಾನ ತೆರಿಗೆ ಇಲಾಖೆಗೆ ಸಂದಾಯವಾಗುತ್ತಿದ್ದರೆ, ಸಂಸ್ಥೆಯು ಸಂದಾಯಮಾಡಿದ ಶುಲ್ಕದ ವಾರ್ಷಿಕ ಮೊತ್ತದ ಶೇಕಡ ೧%ರಷ್ಟನ್ನು ಸೋಡಿ ಬಿಡುವ ಯೋಚನೆಯು ಸೇರಿದೆ.

ಇದುವರೆಗೂ ಕಾರಣಾಂತರಗಳಿಂದ ಪಾನ್ ಕಾರ್ಡ್ ಮಾಡಿಸಿಲ್ಲದವರು, ಮತ್ತು ಕಡೆಯ ಕ್ಷಣಗಳ ಜಂಜಾಟಕ್ಕೆ ಅನುವುಮಾದಿಕೊಡದೆ, ಇಂದೇ ಸಾಧ್ಯವಾದರೆ ಪಾನ್ ಕಾರ್ಡಿಗಾಗಿ ಫಾರ್ಮ್ ಸಂಖ್ಯೆ ೪೯ಎ ಭರ್ತಿಮಾಡಿ ಮತ್ತು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಚುಟುಕಿಸಿ.ಇದಲ್ಲದೆ ನೀವು ಆನ್ ಲೈನ್ ಮುಖಾಂತರವೂ ಪಾನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು.

ತೆರಿಗೆಗಳ ಮಿತಿ ಮತ್ತು ಮಾಹಿತಿ


೨೦೦೯-೧೦ರ ವರಮಾನ ತೆರಿಗೆ ಆವೃತ್ತಿ


ಸಾಮಾನ್ಯ (ಪುರುಷ)

ರೂ.೦ - ರೂ.೧,೬೦,೦೦೦ - ಯಾವುದೇ ತೆರಿಗೆ ಇಲ್ಲ.
ರೂ. ೧,೬೦,೦೦೧ - ರೂ.೩,೦೦,೦೦೦ - ಶೇ ೧೦%
ರೂ. ೩,೦೦,೦೦೧ - ರೂ.೫,೦೦,೦೦೦ -ಶೇ ೨೦%
ರೂ. ೫,೦೦,೦೦೧ ಮೇಲ್ಪಟ್ಟು - ಶೇ ೩೦%

ಮಹಿಳೆ
ರೂ. ೦ - ರೂ. ೧,೯೦,೦೦೦ - ಯಾವುದೇ ತೆರಿಗೆ ಇಲ್ಲ.
ರೂ.೧,೯೦,೦೦೧ - ೩,೦೦,೦೦೦ -ಶೇ ೧೦%
ರೂ. ೩,೦೦,೦೦೧ - ರೂ.೫,೦೦,೦೦೦ -ಶೇ ೨೦%
ರೂ. ೫,೦೦,೦೦೧ ಮೇಲ್ಪಟ್ಟು - ಶೇ ೩೦%

ಹಿರಿಯ ನಾಗರೀಕರಿಗೆ
ರೂ. ೦ - ರೂ. ೨,೪೦,೦೦೦ - ಯಾವುದೇ ತೆರಿಗೆ ಇಲ್ಲ.
ರೂ.೨,೪೦,001 - ೩,೦೦,೦೦೦ -ಶೇ ೧೦%
ರೂ. ೩,೦೦,೦೦೧ - ರೂ.೫,೦೦,೦೦೦ -ಶೇ ೨೦%
ರೂ. ೫,೦೦,೦೦೧ ಮೇಲ್ಪಟ್ಟು - ಶೇ ೩೦%

ಹೆಚ್ಚಿನ ಮಾಹಿತಿ ಅಥವಾ ಇನ್ನಿತರೇ ಸಂದೇಹಗಳಿಗಾಗಿ ನನ್ನ ಮಿಂಚಂಚೆ ವಿಳಾಸಕ್ಕೆ ಬರೆಯಿರಿ.

aravindh.rao AT Gmail.com

SAP FICO TCodes (Steps)

SAP FICO STEPS