ಮುಂದಿನ ವರ್ಷ ಸೇವಾ ತೆರಿಗೆ ಶೇ ೧೨ಕ್ಕೆ ಏರಿಕೆ

ವಿತ್ತೀಯ ಕೊರತೆ ಹೆಚ್ಚಿರುವ ಹಿನ್ನಲೆಯಲ್ಲಿ ಮುಂಬರುವ ಬಜೆಟ್ಟಿನಲ್ಲಿ ಸೇವಾ ತೆರಿಗೆಯನ್ನು ಶೇ ೧೨% ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಸರ್ಕಾರ ಸೇವಾ ತೆರಿಗೆದರವನ್ನು ಶೇ ೧೨ ರಿಂದ ಶೇ ೧೦%ಗೆ ಇಳಿಸಿತ್ತು. ಆರ್ಥಿಕ ಹಿಂಜರಿತವನ್ನು ಎದುರಿಸುವ ಸಲುವಾಗಿ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿತ್ತು. ಇದೀಗ ಮೂಲಮಟ್ಟವಾಗಿದ್ದ ಶೇ ೧೨ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಶೇ ೨ರ ಸೇವಾ ತೆರಿಗೆಯ ಕಡಿತದಿಂದ ಸರ್ಕಾರದ ಬೊಕ್ಕಸಕ್ಕೆ ಸೇವಾ ತೆರಿಗೆ ಆದಾಯದಲ್ಲಿ ಇಳಿಕೆಯಾಗಿತ್ತು. ಹಾಗು ಅಬಕಾರಿಸುಂಕದ ಆದಾಯದಲ್ಲೂ ಇಳಿಕೆಯಾಗಿತ್ತು.



೨೦೦೮-೦೯ರಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ ೨.೫%ರಷ್ಟು ಬಿಂಬಿಸಲಾಗಿತ್ತು. ಆದರೆ ಆರ್ಥಿಕ ಹಿಂಜರಿತದ ಕೊನೆಯ ವೇಳೆಯಲ್ಲಿ ಶೇ ೬ನ್ನು ದಾಟಿದೆ. ಇದು ಶೇ ೬.೮%ಕ್ಕೆ ಹೆಚ್ಚುವ ಅಂದಾಜು ಮಾಡಲಾಗಿದೆ. ಆರ್ಥಿಕತೆಯ ಪುನಶ್ಚೇತನದ ಹಾದಿಯಲ್ಲಿರುವದರಿಂದ ಸರ್ಕಾರ ಸೇವಾ ತೆರಿಗೆಯನ್ನು ಶೇ ೧೨ರ ಮಟ್ಟಕ್ಕೆ ತರಲು ನಿರ್ಧರಿಸಿದೆ.





ಅರವಿಂದ್